ನನ್ನ ಕಾಡುವ ಪ್ರಶ್ನೆಗಳು ???
ಯಾಕೆ ಹಾಗೆ? ಇದು ಬರೀ ನಾನ ಅಥವಾ ನನ್ನ೦ಥೆ ಎಲ್ಲರು ಹಾಗೇನ ? ಇದು ನನ್ನಲ್ಲಿ ಸದಾ ಕಾಡುವ ಪ್ರಶ್ನೆ.. ಹೌದು ನಾನು ಹೇಳ ಹೊರಟಿರುವುದು ನನ್ನ ಅನಿಸಿಕೆಯ ಬಗ್ಗೆ.ನಾವೆಲ್ಲರೂ ಇರುವದ ಬಿಟ್ಟು ಇಲ್ಲದುರ ಬಗ್ಗೆ ಯಾಕೆ ಹಾಗೆ ಯೋಚಿಸೋದು? ನ೦ತರ ಅದು ಸಿಕ್ಕಿದಾಗ, ಅದನ್ನು ಬಿಟ್ಟು ಮತ್ಯಾವುದರ ಬಗ್ಗೆಯೋ ವಲವು. ಯಾಕೆ ಹೀಗೆ ? ಯಾಕೆ ನಾವು ಸಿಕ್ಕಿದ್ದನ್ನು ಸ೦ತೋಷದಿ೦ದ ಅನುಭವಿಸಿವುದಿಲ್ಲ? ಸಿಕ್ಕಿದ್ದನ್ನು ಬಿಟ್ಟು ಮತ್ಯಾವುದರ ಬಗ್ಗೆ ಆಗಲೇ ಯಾಚನೆಗೆ ಬಿದ್ದಿರ್ಥೀವಿ.ಇದು ಬರೀ ಮನುಷ್ಯ ಮಾತ್ರನ ಅಥವಾ ಬೇರೆ ಜೀವಿಗಳು ನಮ್ಮಂತೆ ಮನಸ್ಸನ್ನು ಹೀಗೆ ಹರಿದುಬಿದುತ್ತಾವ? ಗೊತ್ತಿಲ್ಲ.
ಇದೇ ಜೀವನದ ರಹಸ್ಯನಾ? ಹಾಗೆ ಜೀವನ ಇದ್ದರೇನೆ ಅದುಕ್ಕೆ ಒ೦ದು ಬೆಲೆನಾ? ಗೊತ್ತಿಲ್ಲ.. ಆದರೆ ಹಾಗೆ ಇದ್ದರೇನೆ ಜೀವನದಲ್ಲಿ ಒಂದು ಹುಮ್ಮಸು, ಎಲ್ಲದರಲ್ಲೂ ರೆeಸ್ಗೆ ಬಿದ್ದು ನಾನೇ ಗೆಲ್ಲಬೇಕೆಂದು ಮನಸ್ಸು ಓಡುವುದು ಎಷ್ಟು ಸರಿ? ಹಟಕ್ಕೆ ಬಿದ್ದು ನಾವು ನಮಗೆ ಸಿಕ್ಕ ಸ೦ತೊಷವನ್ನೆ ಕಾಲಿನಿಂದ ಒದಿಯೋದು ಸರೀನಾ ?ಹೂ೦ ಅದೂ ಗೊತ್ತಿಲ್ಲ..
ಆದರೂ ಇ೦ದಿನ ಶರವೇಗದ ಯುಗದಲ್ಲಿ ಮನುಷ್ಯ ಯಾವ ಪರಿ ಓಡುತ್ತಿದ್ದಾನೆ ...ಅಬ್ಬಾ! ನೆನೆದರೆ ಮೈ ಹಾಗೆ ಜುಮ್ ಎನ್ನುತ್ತದೆ. ಆತ ಯಾರಿಗೂ ಎದರುವುದಿಲ್ಲ, ಕಾಯುವುದಿಲ್ಲ,ಬಾವನೆಗಳಿಗೆ ಸ್ಪಂದಿಸುವ ತಾಳ್ಮೆ ಯಂತು ಮೊದಲೇ ಇಲ್ಲ. ನಮ್ಮೆಲ್ಲರಿಗೂ ಬೇಕಾಗಿರುವುದು ರೇಸ್ನಲ್ಲಿ ಮೊದಲಿಗರಗೋದು ಅಸ್ಟೆ. ಆದರೆ ಮೊದಲಿಗನಾದ ಮೇಲೆ ನಾವು ಆ ಸಂತೋಷವನ್ನು ನಿಜವಾಗಿಯೂ ಎಂಜಾಯ್ ಮಾಡ್ತ್ಹಿವ ? ಖ೦ಡಿತಾ ಇಲ್ಲ. ಮತ್ತೆ ಯಾಕೆ ನಾವೆಲ್ಲ ಈ ರೇಸನ ಹಿ೦ದೆ ಬಿದ್ದಿರೋದು ? ಅದೂ ಗೊತ್ತಿಲ್ಲ